Friday, March 6, 2026

ದಾಸರ ಪದಗಳ ಗಾಯನ ಮತ್ತು ಕೊಂಚ ಅರ್ಥ ವಿಶ್ಲೇಷಣೆ ಎರಡನ್ನೂ ಒಂದೆಡೆಯಲ್ಲಿ ತಂದಿರಿಸುವ ಒಂದು ಪ್ರಯತ್ನ ಇದು. ಭಾಷೆ ಕನ್ನಡ. ಗಾಯನ ಶ್ರೀಮತಿ ಬೃಂದಾ ರಾವ್. ವಿವರಣೆ ಡಾ ಎಂ ಎಸ್ ರಘುನಂದನ್. ‘Dasa sahitya’ in kannada is a term used for the writings of saints belonging to ‘Dasa pantha’ or ‘dasa’ tradition. Sri Purandara dasaru is the most prominent among them but we also have many others who followed the same tradition, namely, Gopaladasaru, Vijayadasaru, Kanakadasaru and others. Their form of writing is usually poetic and the stress is on devotion.  Most of them are very simple and can be easily understood by anyone. But some of them, usually called ‘MunDige’, appear to make no sense on the first look, but have a very profound philosophical meaning. The compositions were composed and recited instantly, mostly on the move, and not written down and maintained in a systematic manner. (they were recorded in writing by those who heard them) Hence, there is a lot of discrepancy in the mentioned number of compositions, their lyrics as well as interpretation. Even explanations given by the scholars sometimes do not sound logical and convincing. We have tried to give a rendition of some of the songs and also an explanation of some of the ‘dasarapada’, in these youtube videos. The singing is by Brinda Rao and the commentary is by M S Raghunandan.  


ದಾಸರ ಪದಗಳು ಅಥವಾ ರಚನೆಗಳು ಐದುಸಾವಿರವೆಂದು ಕೆಲವರ ಮತ, ಐವತ್ತುಸಾವಿರವೆಂದು

ಕೆಲವರ ಎಣಿಕೆ, ಐದು ಲಕ್ಷವೆನ್ನುವರು ಮತ್ತೆ ಕೆಲವರು. ಖಚಿತವಾಗಿ ತಿಳಿಯದು. ಪದಗಳ

ಸಾಹಿತ್ಯವೂ ಹಾಗೆಯೇ. ಭಾವ ಹೆಚ್ಚುಕಡಿಮೆ ಒಂದೇ ಇದ್ದರೂ ಪದಗಳ ಉಪಯೋಗದಲ್ಲಿ

ಅಂದರೆ ಬರಹದಲ್ಲಿ ಮತ್ತು ಹಾಡುಗಾರಿಕೆಯಲ್ಲಿ ಸಹ ಅನೇಕ ವತ್ಯಾಸಗಳು ಕಾಣಬರುತ್ತವೆ.

ದಾಸರ ಕೆಲವು ಪದಗಳು ಬಹಳ ಸರಳ. ಅದಕ್ಕೆ ಯಾರೂ ಅರ್ಥ ತಿಳಿಸಬೇಕಿಲ್ಲ. ಕೆಲವು

ಪದಗಳ ತಲೆ ಬುಡ ತಿಳಿಯುವುದಿಲ್ಲ. ಅಂಥ ರಚನೆಗಳಿಗೆ ತಿಳಿದವರು ಕೆಲವರು ನೀಡಿರುವ 

ಅರ್ಥಗಳು ಕೂಡ ಅನೇಕ. ನಮಗೆ ಎಟಕುವಂತಿರುವ ಕೆಲವು ದಾಸರಪದಗಳ ಗಾಯನ,

ಅವುಗಳ ವ್ಯಾಖ್ಯಾನ ಒಂದೆಡೆ ದೊರೆಯುವಂತೆ ಮಾಡುವುದು ನಮ್ಮ ಈ ಯು ಟ್ಯೂಬ್

ವಿಡಿಯೋಗಳ ಉದ್ದೇಶ್ಯ. ಇಲ್ಲಿನ ಗಾಯನ ಬೃಂದಾ ರಾವ್ ಅವರದು, ವಿವರಣೆ ರಘುನಂದನ

ಎಂಬ ಹೆಸರಿನ ನನ್ನದು. ತಾವು ಕೇಳಿದರೆ ಸಂತೋಷ, ತಮ್ಮ ಅನಿಸಿಕೆಯನ್ನು ತಿಳಿಸಿದರೆ ಹೆಚ್ಚಿನ ಸಂತೋಷ. 

Daasa sahitya siri : 1 ‘Maadusikkadalla’  Sung by Brinda Rao 

Explanation : Dr M S Raghunandan