Wednesday, September 17, 2025

 ‘ಪಕ್ಷಪಾತಿ ಸೂರ್ಯ’ 

ಅಲ್ಲಿಯೂ ಇದೇ ಸೂರ್ಯನೇ. 

ಇಲ್ಲಿ ಮೂಡುವಂತೆಯೇ ಅಲ್ಲಿಯೂ 

ಮೂಡುತ್ತಾನೆ, ಮುಂಜಾನೆ, ನಮ್ಮೂರಿನಲ್ಲಿ  

ಇಲ್ಲಿ 

ಸುಂದರವಾದ ಸಾಲು ಮನೆಗಳ ನಡುವೆ   

ಅಂದವಾಗಿ ಹರಡಿದ ಹುಲ್ಲುಹಾಸಿನ ಹಿಂದೆ 

ಚಂದವಾಗಿ ಬೆಳೆದ ಗಿಡಮರಗಳ ಎಡೆಯಿಂದ  

ನಸುಗೆಂಪಿನ ಮಂದಹಾಸ ಸೂಸುತ್ತಾನೆ  

ಅಲ್ಲಿ 

ನನ್ನ ಆಕ್ಷೇಪವನ್ನು ಪಕ್ಕಕ್ಕೊತ್ತರಿಸಿ

ನನ್ನ ಪಕ್ಕವೇ ನನ್ನ ಗೋಡೆಗೊತ್ತರಿಸಿ 

ಪಕ್ಕದವ ಕಟ್ಟಿದ ಎತ್ತರದ ಮಾಳಿಗೆಯ 

ಪಕ್ಕದಿಂದ ಉರಿವ ಬಿರುಗಣ್ಣು ಬೀರುತ್ತಾನೆ  ...... 

(ಅಮೆರಿಕೆಯ ಟೆನ್ನೆಸ್ಸಿಯಲ್ಲಿ ಎದುರುಮನೆಯ ಪಕ್ಕದಲ್ಲಿ ಬೆಳಗಿನ ಸೂರ್ಯ ಕಂಡಾಗ ಮನದಲ್ಲಿ ಮೂಡಿದ ಪದ್ಯ)


 


No comments: